Surprise Me!

ಕನಕ ಹಾಗು ಅಂಜನಿಪುತ್ರ ಜಗಳ ಆಡೋದಿಲ್ಲ ! | Filmibeat Kannada

2017-12-15 344 Dailymotion

ಡಿಸೆಂಬರ್ ತಿಂಗಳು ಮುಗಿಯುತ್ತಿದೆ. ಹೊಸ ವರ್ಷ ಬರುವುದರೊಳಗೆ ಕನ್ನಡದ ಕೆಲ ಸಿನಿಮಾಗಳು ತೆರೆಗೆ ಅಪ್ಪಳಿಸುವುದಕ್ಕೆ ಸಿದ್ಧವಾಗಿದೆ. ಈ ವರ್ಷದ ಬಹುನಿರೀಕ್ಷೆಯ ಕೆಲವು ಸಿನಿಮಾಗಳು ಈ ವರ್ಷಾಂತ್ಯಕ್ಕೆ ರಿಲೀಸ್ ಆಗುವ ತಯಾರಿಯಲ್ಲಿವೆ. ಈ ತಿಂಗಳು ರಿಲೀಸ್ ಆಗುವ ಸಿನಿಮಾಗಳ ಪೈಕಿ ಪುನೀತ್ ರಾಜ್ ಕುಮಾರ್ ನಟನೆಯ 'ಅಂಜನಿಪುತ್ರ' ಮತ್ತು ದುನಿಯಾ ವಿಜಯ್ ನಟನೆಯ 'ಕನಕ' ಸಿನಿಮಾ ಪ್ರಮುಖವಾಗಿದ್ದವು. ಮೊದಲು ಈ ಎರಡು ಚಿತ್ರಗಳು ಇದೇ ತಿಂಗಳು ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಇತ್ತು. 'ಅಂಜನಿಪುತ್ರ' ಮತ್ತು 'ಕನಕ' ಚಿತ್ರಗಳ ನಡುವೆ ಪೈಪೋಟಿ ನಡೆಯುತ್ತದೆಯಾ ಎನ್ನವ ಕುತೂಹಲ ಕೂಡ ಮೂಡಿತ್ತು. ಆದರೆ ಈಗ ಗಾಂಧಿನಗರಕ್ಕೆ 'ಅಂಜನಿಪುತ್ರ'ನ ಆಗಮನವಾಗಲು 'ಕನಕ' ದಾರಿ ಬಿಟ್ಟು ಕೊಟ್ಟಿದ್ದಾನೆ. ಕನಕ' ಮತ್ತು 'ಅಂಜನಿಪುತ್ರ' ಸಿನಿಮಾ ಒಂದೇ ತಿಂಗಳು ರಿಲೀಸ್ ಆಗುತ್ತಿಲ್ಲ. ಯಾಕಂದ್ರೆ, ಈಗ ದುನಿಯಾ ವಿಜಯ್ ನಟನೆಯ 'ಕನಕ' ಸಿನಿಮಾ ಬಿಡುಗಡೆಯ ದಿನಾಂಕ ಮುಂದೆ ಹೋಗಿದೆ. <br /> <br />Due to clash of big movies Duniya vijay starrer Kanaka has postponed its release date. <br />

Buy Now on CodeCanyon